ಪ್ರಧಾನ ಮಂತ್ರಿ ಸೂರ್ಯೋದಯ ಯೋಜನ

author
Submitted by shahrukh on Thu, 02/05/2024 - 13:14
CENTRAL GOVT CM
Scheme Open
Highlights
  • ಭಾರತ ಸರ್ಕಾರವು ಹೊಸದಾಗಿ ಘೋಷಿಸಿದ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಅಡಿಯಲ್ಲಿ ಪಡೆಯಬಹುದಾದ ಪ್ರಯೋಜನಗಳು ಈ ಕೆಳಗೆ ನಿಂತಿವೆ :-
    • ಮನೆಯ ಟೆರೆಸ್ ಮೇಲೆ ವಿದ್ಯುತ್ ಸೌರ ವ್ಯವಸ್ಥೆಗಳನ್ನು ಸ್ಥಾಪಿಸಲಾಗುವುದು.
    • ಈ ಸೆಟಪ್ ಫಲಾನುಭವಿಯ ವಿದ್ಯುತ್ ಬಿಲ್ ಕಡಿಮೆ ಮಾಡುತ್ತದೆ.
    • ಸೌರ ವಿದ್ಯುತ್ ವ್ಯವಸ್ಥೆಗಳನ್ನು ಉಚಿತವಾಗಿ ಅಥವಾ ಸಬ್ಸಿಡಿಯಲ್ಲಿ ಒದಗಿಸಲಾಗುವುದು.
    • ಯೋಜನೆಯ ಅಧಿಕೃತ ಪ್ರಾರಂಭದ ನಂತರ ಇತರ ಪ್ರಯೋಜನಗಳು ಲಭ್ಯವಿರುತ್ತವೆ.
Customer Care
  • ಸಂಬಂಧಪಟ್ಟ ಸಚಿವಾಲಯದ ಸಂಪರ್ಕ ವಿವರಗಳನ್ನು ಸರ್ಕಾರದಿಂದ ಬಿಡುಗಡೆಯಾದ ನಂತರ ಈ ಪುಟವನ್ನು ನವೀಕರಿಸಲಾಗುವುದು ಚಂದಾದಾರರಾಗಿ.
ಯೋಜನೆಯ ವಿವರಣೆ
ಯೋಜನೆಯ ಹೆಸರು ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ.
ಯೋಜನೆ ಜಾರಿಯಾದ ದಿನಾಂಕ 2024.
ಯೋಜನೆಯ ಪ್ರಯೋಜನಗಳು ಉಚಿತ ರೂಫ್‌ಟಾಪ್ ಸೋಲಾರ್ ಸಿಸ್ಟಮ್‌ಗಳನ್ನು ಸ್ಥಾಪಿಸಲಾಗುವುದು.
ಯೋಜನೆಯ ಫಲಾನುಭವಿಗಳು ಭಾರತೀಯ ನಿವಾಸಿಗಳು.
ಯೋಜನೆಯ ನೋಡಲ್ ಸಚಿವಾಲಯ ಇನ್ನೂ ತಿಳಿದಿಲ್ಲ.
ಚಂದಾದಾರಿಕೆ ಈ ಯೋಜನೆಯ ನಿಯಮಿತ ನವೀಕರಣಗಳಿಗಾಗಿ ಚಂದಾದಾರರಾಗಬಹುದು.
ಅರ್ಜಿ ಸಲ್ಲಿಸುವ ವಿಧಾನ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಅರ್ಜಿ ನಮೂನೆಯ ಮೂಲಕ.

ಯೋಜನೆಯ ಪರಿಚಯ

  • ಭಾರತ ಸರ್ಕಾರವು 2070 ರ ವೇಳೆಗೆ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.
  • ಇದಲ್ಲದೆ, ಭಾರತ ಸರ್ಕಾರವು 2030 ರ ವೇಳೆಗೆ 500 GW (ಗಿಗಾವ್ಯಾಟ್‌) ವರೆಗೆ ಪಳೆಯುಳಿಕೆ ರಹಿತ ಇಂಧನ ಶಕ್ತಿಯನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ.
  • 2030 ರ ವೇಳೆಗೆ, ಭಾರತ ಸರ್ಕಾರವು ತನ್ನ ಇಂಗಾಲದ ಹೊರಸೂಸುವಿಕೆಯನ್ನು 1 ಶತಕೋಟಿ ಟನ್‌ಗಳಷ್ಟು ಕಡಿಮೆ ಮಾಡುವುದು, ಇಂಗಾಲದ ತೀವ್ರತೆಯನ್ನು 45 % ಕಡಿಮೆ ಮಾಡುವುದು ಹಾಗೂ ನವೀಕರಿಸಬಹುದಾದ ಶಕ್ತಿಯ ಮೂಲಕ ಅದರ ಅರ್ಧದಷ್ಟು ಶಕ್ತಿಯ ಅಗತ್ಯವನ್ನು ಪೂರೈಸುವ ಗುರಿಯನ್ನು ಹೊಂದಿದೆ.
  • ಈ ಯೋಜನೆ ಅಡಿ ಪರಿಸರದ ಪ್ರಯೋಜನವನ್ನು ಗಮನದಲ್ಲಿಟ್ಟುಕೊಂಡು, ಈ ಮೇಲೆ ತಿಳಿಸಿದ ಗುರಿಗಳನ್ನು ಸಮಯಕ್ಕೆ ಸಾಧಿಸಲು, ಭಾರತ ಸರ್ಕಾರವುಭಾರತೀಯರಿಗಾಗಿ ಈ ಯೋಜನೆಯನ್ನು ರೂಪಿಸಿತು.
  • ಶ್ರೀ ರಾಮ ಲಾಲಾ ಅವರ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಅಯೋಧ್ಯಾಧಾಮದಿಂದ ಹಿಂತಿರುಗುತ್ತಿರುವಾಗ,ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಯೋಜನೆಯನ್ನು ಘೋಷಿಸಿದರು.
  • ಈ ಯೋಜನೆಯ ಹೆಸರು "ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ" ಯಾಗಿರುತ್ತದೆ.
  • ಈ ಯೋಜನೆಯನ್ನು ದೇಶದಲ್ಲಿ ಇನ್ನಿತರ ಪ್ರಮುಖ ಹೆಸರುಗಳಿಂದ ಕರೆಯಲಾಗುತ್ತದೆ ಹೆಸರುಗಳ ಸೂಚ ಈ ಕೆಳಗಿನಂತಿದೆ :-
    • "ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ".
    • "Pradhan Mantri Suryodaya Yojana".
    • "Prime Minister (PM) Suryodaya Scheme".
    • "Prime Minister(PM) Suryodaya Scheme".
    • "Prime Minister (PM) Suryodaya Yojana".
  • ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯನ್ನು ಪ್ರಾರಂಭಿಸುವ ಹಿಂದಿನ ಭಾರತ ಸರ್ಕಾರದ ಮುಖ್ಯ ಉದ್ದೇಶವೆಂದರೆ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಸೇರಿದ ಜನರ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದು.
  • ಈ ಯೋಜನೆ ಅಡಿ ಮಧ್ಯಮ ವರ್ಗದ ಕುಟುಂಬಗಳಿಗೆ ವಿದ್ಯುತ್ ಅಗತ್ಯಗಳಿಗಾಗಿ ಅವರನ್ನು ಸ್ವಾವಲಂಬಿಸುವುದು ಇರುತ್ತದೆ.
  • ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯು ಭಾರತವನ್ನು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡುತ್ತದೆ.
  • ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯಡಿ ಫಲಾನುಭವಿಗಳ ಮನೆಯ ಟೆರೆಸ್/ ಛಾವಣಿಯ ಮೇಲೆ ರೂಫ್‌ಟಾಪ್ ಪೋಲಾರ್ ವ್ಯವಸ್ಥೆಗಳನ್ನು ಸ್ಥಾಪಿಸಲಾಗುವುದು.
  • ಈ ಸ್ಥಾಪಿಸಲಾದ ಸೌರ ಮೇಲ್ಛಾವಣಿ ವಿದ್ಯುತ್ ವ್ಯವಸ್ಥೆಯು ಫಲಾನುಭವಿಗಳ ಮನೆಗೆ ಸೂರ್ಯನ ಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸುವ ಮೂಲಕ ಅಗತ್ಯವಿರುವ ವಿದ್ಯುತ್ ಅನ್ನು ಒದಗಿಸುತ್ತದೆ.
  • ಈ ಯೋಜನೆಯಿಂದ ಫಲಾನುಭವಿಗಳ ವಿದ್ಯುತ್ ಬಿಲ್ ಕಡಿಮೆಯಾಗುವುದು ಖಚಿತ.
  • ಭಾರತ ಸರ್ಕಾರವು ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸಲು ಸಜ್ಜಾಗುತ್ತಿದೆ.
  • ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ ಅಡಿಯಲ್ಲಿ ಸುಮಾರು 1 ಕೋಟಿ ಮನೆಗಳು ತಮ್ಮ ಮನೆಯಲ್ಲಿ ಸೌರ ಮೇಲ್ಛಾವಣಿ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ ತನ್ನದೇ ಆದ ವಿದ್ಯುತ್ ವ್ಯವಸ್ಥೆಯನ್ನು ಪಡೆಯಬಹುದು.
  • ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯಡಿ ಮೇಲ್ಛಾವಣಿಯ ಸೌರ ವ್ಯವಸ್ಥೆಯನ್ನು ಉಚಿತವಾಗಿ ನೀಡಲಾಗುತ್ತದೆಯೇ ಅಥವಾ ಸಬ್ಸಿಡಿ ಬೆಲೆಯಲ್ಲಿ ನೀಡಲಾಗುವುದು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.
  • ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯ ಪ್ರಯೋಜನಗಳು ಭಾರತದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮಾತ್ರ ಒದಗಿಸುತ್ತವೆ.
  • ಶೀಘ್ರದಲ್ಲೇ ಯೋಜನೆಯ ಅಧಿಕೃತ ಮಾರ್ಗಸೂಚಿಗಳನ್ನು ಸಂಬಂಧಪಟ್ಟ ಸಚಿವಾಲಯ ಬಿಡುಗಡೆ ಮಾಡಲಿದೆ ಯೋಜನೆ ನಿಯಮಿತ ನವೀಕರಣಗಳನ್ನು ಪಡೆಯಲು ಚಂದದಾರರಾಗಬಹುದು.
  • ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯ ಉಳಿದ ಪ್ರಯೋಜನಗಳು, ಅರ್ಹತಾ ಷರತ್ತುಗಳು, ಅರ್ಜಿ ನಮೂನೆ ಮತ್ತು ಅನ್ವಯಿಸುವ ವಿಧಾನವನ್ನು ಮಾರ್ಗಸೂಚಿಗಳೊಂದಿಗೆ ಬಿಡುಗಡೆ ಮಾಡಲಾಗುತ್ತದೆ.
  • ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಕುರಿತು ಯಾವುದೇ ಘೋಷಣೆ ಯಾದ ಕ್ಷಣಕ್ಕೆ ಈ ಪುಟವನ್ನು ನವೀಕರಿಸಲಾಗುವುದು.

Pradhan Mantri Suryoday Yojana Benefits

ಯೋಜನೆಯ ಪ್ರಯೋಜನಗಳು

  • ಭಾರತ ಸರ್ಕಾರವು ಹೊಸದಾಗಿ ಘೋಷಿಸಿದ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಅಡಿಯಲ್ಲಿ ಪಡೆಯಬಹುದಾದ ಪ್ರಯೋಜನಗಳು ಈ ಕೆಳಗೆ ನಿಂತಿವೆ :-
    • ಮನೆಯ ಟೆರೆಸ್ ಮೇಲೆ ವಿದ್ಯುತ್ ಸೌರ ವ್ಯವಸ್ಥೆಗಳನ್ನು ಸ್ಥಾಪಿಸಲಾಗುವುದು.
    • ಈ ಸೆಟಪ್ ಫಲಾನುಭವಿಯ ವಿದ್ಯುತ್ ಬಿಲ್ ಕಡಿಮೆ ಮಾಡುತ್ತದೆ.
    • ಸೌರ ವಿದ್ಯುತ್ ವ್ಯವಸ್ಥೆಗಳನ್ನು ಉಚಿತವಾಗಿ ಅಥವಾ ಸಬ್ಸಿಡಿಯಲ್ಲಿ ಒದಗಿಸಲಾಗುವುದು.
    • ಯೋಜನೆಯ ಅಧಿಕೃತ ಪ್ರಾರಂಭದ ನಂತರ ಇತರ ಪ್ರಯೋಜನಗಳು ಲಭ್ಯವಿರುತ್ತವೆ.

ಯೋಜನೆಯ ಅರ್ಹತೆ

  • ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯಪ್ರಯೋಜನ ಪಡೆಯಲು ಈ ಕೆಳಗಿನ ರಹತಾ ಶರತ್ತುಗಳು ಅನ್ವಯಿಸುತ್ತದೆ :-
    • ಅರ್ಜಿದಾರರು ಭಾರತೀಯ ನಿವಾಸಿಯಾಗಿರಬೇಕು.
    • ಅರ್ಜಿದಾರರು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರಾಗಿರಬೇಕು.
    • ಅರ್ಜಿದಾರರು ಸ್ವಂತ ಮನೆಯನ್ನು ಹೊಂದಿರಬೇಕು.
    • ಸೋಲಾರ್ ವ್ಯವಸ್ಥೆಯನ್ನು ಸ್ಥಾಪಿಸಲು ಮನೆಯ ಮೇಲೆ ಸಾಕಷ್ಟು ಸ್ಥಳಾವಕಾಶ ಇರಬೇಕು.
    • ಇತರ ಅರ್ಹತಾ ಷರತ್ತುಗಳೊಂದಿಗೆ ಆದಾಯದ ಮಾನದಂಡಗಳನ್ನು ಮಾರ್ಗಸೂಚಿಗಳೊಂದಿಗೆ ಬಿಡುಗಡೆ ಮಾಡಲಾಗುವುದು.

ಅಗತ್ಯವಿರುವ ದಾಖಲೆಗಳು

  • ಭಾರತ ಸರ್ಕಾರದ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಅಡಿಯಲ್ಲಿ ಫಲಾನುಭವಿಯಾಗಲು ಬೇಕಾಗುವ ದಾಖಲೆಗಳ ವಿವರ ಈ ಕೆಳಗಿನಂತಿದೆ :-
    • ಆಧಾರ್ ಕಾರ್ಡ್.
    • ಮೊಬೈಲ್ ನಂಬರ.
    • ಮನೆಗೆ ಸಂಬಂಧಿಸಿದ ದಾಖಲೆಗಳು.
    • ಆದಾಯ ಪ್ರಮಾಣಪತ್ರ.
    • ಜಾತಿ ಪ್ರಮಾಣ ಪತ್ರ. (ಅನ್ವಯವಾದಲ್ಲಿ)

ಅರ್ಜಿ ಸಲ್ಲಿಸುವ ವಿಧಾನ

  • ಭಾರತದ ಪ್ರಧಾನಮಂತ್ರಿ ಶ್ರೀ ರಾಮಲಾಲಾ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಂಡು ಅಯೋಧ್ಯಾಧಾಮದಿಂದ ಹಿಂದಿರುಗುವಾಗ "ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ" ಪ್ರಾರಂಭಿಸುವುದಾಗಿ ಘೋಷಿಸಿದರು.
  • ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಅಡಿಯಲ್ಲಿ ಸುಮಾರು 1 ಕೋಟಿ ಜನರ ಟೆರೇಸ್‌ನಲ್ಲಿ ರೂಫ್‌ಟಾಪ್ ಸೋಲಾರ್ ಸಿಸ್ಟಮ್‌ಗಳನ್ನು ಸ್ಥಾಪಿಸಲಾಗುವುದು.
  • ಈ ಯೋಜನೆಯ ಮುಖ್ಯ ಉದ್ದೇಶ ಏನಂದರೆಭಾರತದ ಬಡ ಮತ್ತು ಮಧ್ಯಮ ವರ್ಗದ ಜನರ ವಿದ್ಯುತ್ ಬಿಲ್ ಕಡಿಮೆ ಮಾಡುವುದು.
  • ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯನ್ನು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದೀಗ ಘೋಷಿಸಿದ್ದಾರೆ.
  • ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮೂಲಕ ಇದೇಯು ಅಥವಾ ಆಫ್ಲೈನ್ ಮೂಲಕವಿದೆ ಇನ್ನು ಸ್ಪಷ್ಟವಾಗಿಲ್ಲ ಮಾರ್ಗಸೂಚಿ ಬಿಡುಗಡೆಯಾದ ನಂತರ ಈ ಪುಟವನ್ನು ನವೀಕರಿಸಲಾಗುವುದು.
  • ಈ ಯೋಜನೆ ಅಡಿ ಆನ್ಲೈನ್ ಮೂಲಕ ಅಥವಾ ಆಫ್ ಲೈನ್ ಒಳಗಾಗಿ ಸಲ್ಲಿಸುವುದು ಸಂಪೂರ್ಣವಾಗಿ ಭಾರತ ಸರ್ಕಾರದ ಮೇಲೆ ನಿರ್ಭರಿಸುತ್ತದೆ.
  • ಭಾರತ ಸರ್ಕಾರದ ಸಂಬಂಧಪಟ್ಟ ಸಚಿವಾಲಯವು ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯ ಅಧಿಕೃತ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

Pradhanmantri Suryodaya Yojana

ಅಗತ್ಯವಿರುವ ವೆಬ್ ಸೈಟ್ ಲಿಂಕ್

  • ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಅರ್ಜಿನಮೂನೆ ಹಾಗೂ ಅದರ ಅಧಿಕೃತಿ ಮಾರ್ಗಸೂಚಿಗಳು ಸರ್ಕಾರದಿಂದ ಬಿಡುಗಡೆಯಾದ ನಂತರ ಈ ಪುಟವನ್ನು ನವೀಕರಿಸಲಾಗುವುದು.

ಅಗತ್ಯವಿರುವ ಸಂಪರ್ಕ ವಿವರಗಳು

  • ಸಂಬಂಧಪಟ್ಟ ಸಚಿವಾಲಯದ ಸಂಪರ್ಕ ವಿವರಗಳನ್ನು ಸರ್ಕಾರದಿಂದ ಬಿಡುಗಡೆಯಾದ ನಂತರ ಈ ಪುಟವನ್ನು ನವೀಕರಿಸಲಾಗುವುದು ಚಂದಾದಾರರಾಗಿ.
Person Type Govt

Comments

Permalink

ಅಭಿಪ್ರಾಯ

प्रधानमंत्री सूर्योदय योजना में जो सोलर रूफटॉप बिजली के लिए लगाए जायेंगे वो फ्री होंगे क्या

Permalink

ಅಭಿಪ್ರಾಯ

Gar

Add new comment

Plain text

  • No HTML tags allowed.
  • Lines and paragraphs break automatically.

Rich Format