Add new comment

Permalink

ಅಭಿಪ್ರಾಯ

ಇವರಿಗೆ,
ಮಾನ್ಯ ಜಿಲ್ಲಾಧಿಕಾರಿಗಳು ಬೀದರ್.

ವಿಷಯ:- ನನ್ನ ಮಗಳ ಭಾಗ್ಯಲಕ್ಷ್ಮ ಬಾಂಡ್ಅಂಗನವಾಡಿ ಟೀಚರ್ ಕೊಡದೆ ಇರುವ ಬಗ್ಗೆ ಕುರಿತು.
ಮಾನ್ಯರೇ,
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಸಂಗೀತ ಗಂಡ ಸಿದ್ದಾರ್ಥ್ ಕಾಂಬಲೆ ಮುಖ್ಖಮ ನೌಬದ ಬೀದರ ನಿವಾಸಿಯಾಗಿದ್ದು, 2011ರಲ್ಲಿ ನಾನು ಒಂದು ಹೆಣ್ಣುಮಗವನ್ನು ಜನ್ಮನೀಡಿರುತ್ತೇನೆ, ಸರ್ಕಾರದ ಆದೇಶದಂತೆ ಹೆಣ್ಣು ಮಗಳಿಗೆ, ಭಾಗ್ಯಲಕ್ಷ್ಮಿ ಬೌಂಡ್ ಮಾಡಿ ಕೊಡುತ್ತೇನೆಂದು ನನಗೆ ಅಂಗನವಾಡಿ ಟೀಚರ್ ಹೇಳಿರುತ್ತಾರೆ, ಇದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇರುವುದಿಲ್ಲದ ಕಾರಣ ಅಂಗನವಾಡಿ ಟೀಚರ್ ಗೆ ಸಂಪರ್ಕಿಸಿ, ಅವರು ಇದರ ಕುರಿತು ಮಾಹಿತಿ ನೀಡಿರುತ್ತಾರೆ ಮತ್ತು ಬೋಂಡ ಕೊಡುವೆನೆಂದು ಭರವಸೆ ನೀಡಿರುತ್ತಾರೆ. ಒಂದು ವರ್ಷ ಆದ ನಂತರ ಭಾಗ್ಯಲಕ್ಷ್ಮಿ ಬಾಂಡ್ ಕೊಡುವೆನೆಂದು ಹೇಳಿರುತ್ತಾರೆ. ನಾನು ಒಂದು ವರ್ಷ ನಿರಂತರವಾಗಿ ಅವರ ಸಂಪರ್ಕದಲಿಯೇ ಇರುತ್ತೇನೆ, ತದಾದನಂತರ ಅವರು ಕೊಟ್ಟ ಅವಧಿ ಮುಗಿದಿರುತ್ತದೆ ಒಂದು ವರ್ಷವಾದ ಮೇಲೆ ಕೇಳಿದಾಗ ಇನ್ನೂ ಸ್ವಲ್ಪ ತಿಂಗಳು ನಿಲ್ಲೂ ನಿನ್ನ ಬಾಂಡ್ ಸಿಗುತ್ತೆ ಕೂಡುತಿನಿ ಎಂದು ಹೇಳುತ್ತಾನೆ ಇದ್ದರೂ, ಹೀಗೆ ಇವತ್ತು ನಾಳೆ ಎಂದು ದಿನಗಳು ಮುಂದಗಡೆ ಹಾಕುತ ದಿನಾಲೂ ಕೇಳಲು ಪ್ರಾರಂಭಿಸಿದಾಗ ಅವರು ನನಗೆ ನೋಡೋಣ ಬರುತ್ತದೆ ಅಂತ ಹೇಳುತ್ತ ಸಮಯ ಕಳೆದರೂ,ಅಂಗನವಾಡಿ ಟೀಚರ್ ಶಾಂತಮ್ಮ ನೌಬಾದ್ ರವರಿಗೆ ಹೋಗಿ ನಾನು ಪದೇ ಪದೇ ಕೇಳಿದಾಗ ದಿನಗಳು ಮುಂದೊಡಿಸಿ, ಇನ್ನೂ ಕೂಡ ಮುಂಚೆ ಎರಡು-ಮೂರು ಸಾರಿ ನನ್ನ ತಾಯಿ ಮತ್ತು ಮಗಳಿಗೆ ಅವರ ಮನೆಗೆ ಕೂಡ ಹೋಗಿ ಬಂದಿದ್ದೇವೆ ಆದರೂ ಕೂಡ ಅವರು ನಮಗೆ ಕೊಡದೆ ಸುಮ್ಮನೆ ಸತಾಯಿಸುತ್ತಾ ಇದ್ದಾರೆ, ಕೇಳಿದರೆ ನಿಮ್ಮ ಬೊಂಡು ಆಫೀಸಲ್ಲಿದೆ, ಮೇಡಂಗೆ ಕೇಳಿ ನಮಗೆ ಏನು ಗೊತ್ತಿಲ್ಲ ಎಷ್ಟು ವರ್ಷ ಏನು ಮಾಡಿದೆ ಏನಿಲ್ಲ ಅಂತ ನಮ್ಮನೆ ಪ್ರಶ್ನೆ ಕೇಳ್ತಾ ಇರುತ್ತಾರೆ, ನಾವು ಬಡತನದಲ್ಲಿ ಸಂಸಾರ ಮಾಡುವವರು ಹಾಗೂ ನನಗೆ ನನ್ನ ಗಂಡನ ಮಾನಸಿಕ ಆರೋಗ್ಯ ಇರದ ಕಾರಣ ನಾವು 3-4 ವರ್ಷಗಳಿಂದ ನಮ್ಮ ಮನೆಯವರಿಗೆ ತಲೆಯ ಅಪ್ರೇಶನ್ ಮಾಡಿಸಿರುತ್ತೇನೆ. ಇದಾದ ಮೇಲೆ ನಾವು ನಮ್ಮ ತವರ ಮನೆಯಲ್ಲಿ ಬಂದು ಜೀವನ ಮಾಡಲು ನಡೆಸುತ್ತಿರುತ್ತೇವೆ,ಈ ಕುರಿತು ಎರಡು ಮೂರು ಸಾರಿ ನಾನು ಅವರ ಮನೆಗೆ ಹೋಗಿದ್ದಾಗ ನಮ್ಮ ಹತ್ತಿರ ಇಲ್ಲ ನಿಮ್ಮ ಬೊಂಡು ಕೇಳಬೇಕಾಗುತ್ತದೆ ನೋಡಬೇಕಾಗುತ್ತದೆ, ಆದರೆ ಇವಾಗ ಬೇಸತ್ತು ಹೋದ ನಾನು ನನ್ನ ಗಂಡನ ಆರೋಗ್ಯ ಸರಿಯಾಗಿ ಇರದ ಕಾರಣ ದಯವಿಟ್ಟು ತಾವು ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಶಾಂತಮ್ಮ ಮೇಡಂ ಅವರಿಗೆ ವಿಚಾರಣೆ ಮಾಡಿ ನನ್ನ ಮಗಳ ಬಾoಡನ್ನು ನಮಗೆ ಒದಗಿಸಿ ಕೊಡಬೇಕಾಗಿ ತಮ್ಮಲ್ಲಿ ಅತಿ ಕಳಕಳಿಯ ಮನವಿ ಮಾಡಿಕೊಳ್ಳುತ್ತೇನೆ,

ಇಂತಿನಿಮ್ಮ ವಿಶ್ವಾಸಿನಿ
ಸಂಗೀತ ಗಂಡ ಸಿದ್ದಾರ್ಥ್

Plain text

  • No HTML tags allowed.
  • Lines and paragraphs break automatically.

Rich Format